ವಿಶ್ವ ದರ್ಶನ: ಬಜೆಟ್'ನಲ್ಲಿ- ನನ್ನ ಮೊದಲ ಪುಸ್ತಕ (Kannada) - eNidhi India Travel Blog

ವಿಶ್ವ ದರ್ಶನ: ಬಜೆಟ್'ನಲ್ಲಿ- ನನ್ನ ಮೊದಲ ಪುಸ್ತಕ (Kannada)

ಕರ್ನಾಟಕ ರಾಜ್ಯೋತ್ಸವದ ದಿನವಾದ ನವೆಂಬರ್ ಒಂದರಂದು ನನ್ನ ಮೊದಲ ಪುಸ್ತಕವನ್ನು - ಅದೂ  ಕನ್ನಡದಲ್ಲಿ -ಲೋಕಾರ್ಪಣೆ ಮಾಡಲು ಸಂತಸವಾಗುತ್ತಿದೆ. [English version of this post is available here]

"ವಿಶ್ವ ದರ್ಶನ: ಬಜೆಟ್'ನಲ್ಲಿ" ಎಂಬ ಶೀರ್ಷಿಕೆಯಡಿಯಲ್ಲಿ ಬರೆದಿರುವ ಈ ಪುಸ್ತಕ  ವಿದೇಶ ಪ್ರಯಾಣದ ಖರ್ಚು ಕಡಿಮೆಗೊಳಿಸಲು ಓದುಗರಿಗೆ ನೆರವಾಗಲಿದೆ. ಕಡಿಮೆ ದರದ ವಿಮಾನ ಟಿಕೆಟ್ ಪಡೆಯುವುದು ಹೇಗೆ, ವೀಸಾ, ವಸತಿ, ಊಟ, (ಸಸ್ಯಾಹಾರಿ), ಸ್ಥಳೀಯ ಸುತ್ತಾಟ, ಸಂಭವನೀಯ ತಪ್ಪುಗಳು ಮತ್ತು ಅವುಗಳಿಂದ ರಕ್ಷಿಸಿಕೊಳ್ಳುವುದು, ಸುರಕ್ಷತಾ ಮುನ್ನೆಚ್ಚರಿಕೆ ಮತ್ತಿತರ ಅಂಶಗಳನ್ನು ವಿವರವಾಗಿ ತಿಳಿಸಿಕೊಡಲಾಗಿದೆ. ಟ್ರಾವೆಲ್ ಏಜೆಂಟರ ಪ್ಯಾಕೇಜ್ ಟೂರ್'ಗೆ ಲಕ್ಷಾಂತರ ಸುರಿಯುವ ಬದಲು ಅತಿ ಕಡಿಮೆ ಖರ್ಚಿನಲ್ಲಿ ನಾವೇ ಉತ್ತಮ ವಿದೇಶ ಪ್ರವಾಸ ಆಯೋಜಿಸಲು ಈ ಪುಸ್ತಕ ನೆರವಾಗುತ್ತದೆ. ಪುಸ್ತಕದಲ್ಲಿ ನೀಡಿದ ಸಲಹೆಗಳನ್ನು ಬಳಸಿ ಪ್ರತಿ ಟ್ರಿಪ್ಪಿನಲ್ಲೂ ಸಾವಿರಾರು ರೂಪಾಯಿ ಉಳಿಸಲು ಸಾಧ್ಯವಿದೆ. ನನ್ನ ಇದುವರೆಗಿನ ೩೯ ದೇಶ ಸುತ್ತಿದ ಅನುಭವದ ಆಧಾರದ ಮೇಲೆ ಪುಸ್ತಕ ಮೂಡಿಬಂದಿದೆ.

"ವಿಶ್ವ ದರ್ಶನ: ಬಜೆಟ್'ನಲ್ಲಿ" ಪುಸ್ತಕ ಖರೀದಿಗೆ ಸಿದ್ಧವಾಗಿದೆ.
ಪುಟಗಳು: ೧೧೦
ISBN: 9781647333850
ಸದ್ಯಕ್ಕೆ ನೋಷನ್ ಪ್ರೆಸ್ ಕಂಪೆನಿಯ ಜಾಲತಾಣದಲ್ಲಿ ಆರ್ಡರ್ ಮಾಡಬಹುದು.
https://notionpress.com/read/world-travel-in-low-budget
  • ಬೆಲೆ ೨೨೦ ರೂಪಾಯಿ. ಅಂಚೆ ವೆಚ್ಚ ಪ್ರತ್ಯೇಕ. (೫೦ ರೂ ಒಂದು ಪ್ರತಿಗೆ, ಹೆಚ್ಚು ಪ್ರತಿಗಳು ಅಥವಾ ಇತರ ಪುಸ್ತಕಗಳನ್ನು ಕೊಂಡರೆ ಒಟ್ಟು ಅಂಚೆ ಮೊತ್ತ ಕಡಿಮೆಯಾಗಬಹುದು)
  • ಮುಂದಿನ ಹತ್ತು ದಿನಗಳ ತನಕ (ನವೆಂಬರ್ ೧೦) ಉಚಿತ ಶಿಪ್ಪಿಂಗ್ ಕೊಡುಗೆ ಇದೆ. ಅಂದರೆ ಅಂಚೆ ವೆಚ್ಚದ ಹೆಚ್ಚುವರಿ ಖರ್ಚಿಲ್ಲದೆ ಖರೀದಿಸಬಹುದು. 
  • ಇದಲ್ಲದೆ ಮೊದಲ ನೂರು ಕೊಳ್ಳುಗರಿಗೆ ಹೆಚ್ಚುವರಿ ಡಿಸ್ಕೌಂಟ್ ಲಭ್ಯವಿದೆ- ಇದಕ್ಕಾಗಿ ಆರ್ಡರ್ ಮಾಡುವ ಸಮಯದಲ್ಲಿ ನನ್ನನ್ನು ಸಂಪರ್ಕಿಸಿ. ಕೂಪನ್ ಕೋಡ್ ಕೊಡುತ್ತೇನೆ (ಉಳಿದಿದ್ದರೆ)
  • ಭಾರತದಲ್ಲಿ ಮಾತ್ರ ಡೆಲಿವರಿ ಸಾಧ್ಯ. ವಿದೇಶದಲ್ಲಿದ್ದರೆ ಕ್ಷಮಿಸಿ.  ಆನ್-ಲೈನ್ ನಲ್ಲಿ ಮಾತ್ರ ಲಭ್ಯವಿದೆ, ನಿಮ್ಮ ಸಮೀಪದ ಪುಸ್ತಕದ ಅಂಗಡಿಯಲ್ಲಿ ತಕ್ಷಣಕ್ಕೆ ಸಿಗುವುದಿಲ್ಲ. 
  • ಆರ್ಡರ್ ಬಂದ ಮೇಲೆ ಪುಸ್ತಕವನ್ನು ಮುದ್ರಿಸಿ ನಂತರ ಕೊರಿಯರ್ ಮೂಲಕ ಕಳಿಸಲಾಗುತ್ತದೆ. ಮೊದಲೇ ನೂರಾರು ಪ್ರತಿ ಮುದ್ರಿಸಿ ಇಟ್ಟುಕೊಳ್ಳುವುದಿಲ್ಲ. ಹಾಗಾಗಿ ನೀವು ಆರ್ಡರ್ ಮಾಡಿ ೭-೧೦ ದಿನ ಕಾಯಬೇಕಾಗಬಹುದು. 

ಇನ್ನು ಒಂದೆರಡು ದಿನಗಳಲ್ಲಿ ಪುಸ್ತಕ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಗಳಲ್ಲಿ ಕೂಡ ಲಭ್ಯವಾಗಲಿದೆ.


ಪುಸ್ತಕಕ್ಕೆ ಮುನ್ನುಡಿ ಬರೆದ ಡಾ| ಪವನಜ  ಯು ಬಿ ಹೀಗೆ ಹೇಳುತ್ತಾರೆ
"ಕನ್ನಡದಲ್ಲಿ ಪ್ರವಾಸ ಸಾಹಿತ್ಯ ವಿಪುಲವಾಗಿದೆ. ೧೯ನೆಯ ಶತಮಾನದಲ್ಲೇ ಪ್ರವಾಸಗಳ ಬಗ್ಗೆ ಪುಸ್ತಕಗಳು ಕನ್ನಡದಲ್ಲಿ ಬಂದಿವೆ. ಪುಸ್ತಕಗಳಿಗೆ ಪ್ರಶಸ್ತಿ ನೀಡುವಾಗಲೂ ಪ್ರವಾಸ ಸಾಹಿತ್ಯ ಎಂಬ ಪ್ರತ್ಯೇಕ ವಿಭಾಗವನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತಿದೆ. ಅವೆಲ್ಲಾ ಸರಿ. ಅದರೆ ಪ್ರವಾಸ ಮಾಡುವುದು ಹೇಗೆ, ಅದರಲ್ಲೂ ಅತಿ ಕಡಿಮೆ ಖರ್ಚಿನಲ್ಲಿ ಪ್ರವಾಸ ಮಾಡುವುದು ಹೇಗೆ, ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ಅತಿ ಕಡಿಮೆ ಖರ್ಚಿನಲ್ಲಿ ವಿದೇಶ ಪ್ರವಾಸ ಮಾಡುವುದು ಹೇಗೆ ಎಂದು ಯಾರಾದರೂ ಪುಸ್ತಕ ಬರೆದುದು ನನಗೆ ತಿಳಿದಿಲ್ಲ. ಈ ಕೊರತೆಯನ್ನು ಈಗ ಶ್ರೀನಿಧಿ ಹಂದೆ ತುಂಬಿಸಿದ್ದಾರೆ. "

ಈ ಪುಸ್ತಕವನ್ನು ಸ್ವ- ಪ್ರಕಟಣೆ ಮಾದರಿಯಲ್ಲಿ ನೋಷನ್ ಪ್ರೆಸ್ ನವರ ತಂತ್ರಾಂಶ ಬಳಸಿ ನಾನೇ ಸಿದ್ಧಪಡಿಸಿ ನಿಮ್ಮ ಮುಂದಿಡುತ್ತಿದ್ದೇನೆ. ಮುಖಪುಟ ವಿನ್ಯಾಸ, ಡಿ.ಟಿ.ಪಿ. ಇತ್ಯಾದಿಗಳಿಗೆ ಪರಿಣಿತರ ಸಹಾಯ ಪಡೆದಿಲ್ಲ. ತಂತ್ರಾಂಶದ ಕೆಲವು ಇತಿಮಿತಿಯಿಂದ (ಉದಾ ಒಂದೇ ಫಾಂಟ್, ಟೇಬಲ್ ಸೇರಿಸುವ  ಆಯ್ಕೆ ಇಲ್ಲ ಇತ್ಯಾದಿ) ಕೆಲವು ಸಣ್ಣ ಸಣ್ಣ ಕಾಂಪ್ರೊಮೈಸ್ ಮಾಡಿಕೊಳ್ಳಬೇಕಾಗಿದೆ. ಕ್ಷಮೆ ಇರಲಿ.

ನನಗೊಂದು ಉಚಿತ ಪ್ರತಿ ಸಿಗಬಹುದೇ?
ಆಪ್ತರಿಗೆಲ್ಲ ಒಂದೊಂದು ಪ್ರತಿ ಉಚಿತವಾಗಿ ಹಂಚಬೇಕೆಂಬ ಆಸೆ ನನಗೂ ಇದೆ. ಆದರೆ ಈ ಪುಸ್ತಕಕ್ಕೆ ಯಾವುದೇ ಪ್ರತಿಷ್ಠಿತ ಪ್ರಕಾಶಕರ ಸಾಥ್ ಇಲ್ಲದೇ ಇರುವುದರಿಂದ ನನ್ನ ಬಳಿ ಹಂಚಲು ಪ್ರತಿಗಳು ಇಲ್ಲ. ನನಗೆ ಬೇಕಾದ ಪುಸ್ತಕವನ್ನೂ ದುಡ್ಡು ಕೊಟ್ಟೇ ಖರೀದಿಸಬೇಕಿದೆ. ಹಾಗಾಗಿ ಉಚಿತವಾಗಿ ಕೊಡಲು ಈಗ ಸಾಧ್ಯವಿಲ್ಲ. ದಯವಿಟ್ಟು ಒಂದು ಪ್ರತಿ ಖರೀದಿಸಿ ಸಹಕರಿಸಿ. ಪುಸ್ತಕದ ಬೆಲೆ ಒಂದು ಸಿನೆಮಾ ಟಿಕೇಟಿಗಿಂತ, ಒಂದು ಪಿಜ್ಜಾ ದರಕ್ಕಿಂತ ಕಡಿಮೆ.

ನಿಮ್ಮ ಸಹಾಯ ಬೇಕಿದೆ. 
ನನ್ನ ಮೊದಲ ಪುಸ್ತಕದ ಪ್ರಚಾರ ಹಾಗೂ  ಮಾರಾಟದಲ್ಲಿ ನೆರವಾಗುವಂತೆ ಕೋರುತ್ತೇನೆ. ನಿಜವಾಗಿಯೂ ಉಪಯೋಗಿಯಾಗಿರುವ ಈ ಪುಸ್ತಕಕ್ಕೆ ಹಾಕಿದ ಹಣ ಒಂದೇ ಟ್ರಿಪ್ಪಿನಲ್ಲಿ ಉಳಿಸಿ ವಾಪಾಸ್ ಪಡೆಯಬಹುದು. ವಿದೇಶ ಪ್ರಯಾಣ ಕೈಗೊಳ್ಳಲು ಬಯಸುವ ಹೆಚ್ಚು ಹೆಚ್ಚು ಕನ್ನಡಿಗರಿಗೆ ಈ ಪುಸ್ತಕ ತಲುಪಲು ನೆರವಾಗಿ.
  • ಒಂದು ಅಥವಾ ಎರಡು ಪ್ರತಿ ಖರೀದಿಸಿ ನನ್ನನ್ನು ಪ್ರೋತ್ಸಾಹಿಸಿ 
  • ಸಾಮಾಜಿಕ ಜಾಲತಾಣದಲ್ಲಿ ಪುಸ್ತಕದ ಬಗ್ಗೆ ಒಂದೆರಡು ಸಾಲು ಬರೆಯಿರಿ, ಸ್ನೇಹಿತರೊಂದಿಗೆ, ವಾಟ್ಸಾಪ್ ಗುಂಪಿನಲ್ಲಿ ಹಂಚಿಕೊಳ್ಳಿ. 
  • ಅಮೆಜಾನ್, ಫ್ಲಿಪ್ಕಾರ್ಟ್ ಗಳಲ್ಲಿ ಪುಸ್ತಕದ ಬಗ್ಗೆ ರಿವ್ಯೂ ಬರೆಯಿರಿ 
  • ನಿಮ್ಮ ಸಹೋದ್ಯೋಗಿಗಳಿಗೆ, ಬಂಧು ಮಿತ್ರರಿಗೆ ಪುಸ್ತಕದ ಬಗ್ಗೆ ತಿಳಿಸಿ. 
ಆಯ್ದ ಅಭಿಪ್ರಾಯಗಳನ್ನು ಪುಸ್ತಕದ ಮುಂದಿನ ಆವೃತ್ತಿಯಲ್ಲಿ ಪ್ರಕಟಿಸಲಾಗುವುದು. (ಸ್ಥಳಾವಕಾಶ ನೋಡಿಕೊಂಡು) ಉಳಿದವುಗಳನ್ನು ನನ್ನ ಬ್ಲಾಗ್ ನಲ್ಲಿ ಪ್ರಕಟಿಸುವ ಮೂಲಕ  ಅಥವಾ ಇತರ ವಿಧಾನದಲ್ಲಿ ಕೃತಜ್ಞತೆ ಸಲ್ಲಿಸಲಾಗುವುದು.
https://notionpress.com/read/world-travel-in-low-budget

ನಿಮ್ಮ ಸಹಕಾರ ಹಾಗು ಪ್ರೋತ್ಸಾಹದ ನಿರೀಕ್ಷೆಯಲ್ಲಿ.

ಶ್ರೀನಿಧಿ ಹಂದೆ 

3 comments:

  1. ಅಭಿನಂದನೆಗಳು. ಕನ್ನಡದಲ್ಲಿ ಇಂತಹ ಮಾಹಿತಿಯುಳ್ಳ ಪುಸ್ತಕದ ಅವಶ್ಯಕತೆ ಖಂಡಿತ ಇತ್ತು. ಸ್ವಾನುಭವದಿಂದ ಮೂಡಿಬಂದಿರುವ ಈ ಪುಸ್ತಕ ಪ್ರವಾಸ ಪ್ರಿಯರಿಗೆ ಕೊಡುಗೆಯಾಗಬಲ್ಲುದು. ಧನ್ಯವಾದಗಳು.

    ReplyDelete
    Replies
    1. ಧನ್ಯವಾದಗಳು . ನಿಮಗೆ ಪುಸ್ತಕ ಇಷ್ಟವಾಗುತ್ತದೆ ಎಂದು ನಿರೀಕ್ಷಿಸುತ್ತೇನೆ

      Delete
  2. Hello Shrinidhi,

    I bought the book in one shot red fully book really it very handy guide when ever planning trip to abroad.

    Deepak B H

    ReplyDelete

Appreciate your efforts and interests to comment. Comments may be moderated due to increased spam. Will ideally respond to comments within few days.Use Anonymous option if you don't wish to leave your name/ID behind- Shrinidhi

Powered by Blogger.