Kannada Poem- ತಲೆತಗ್ಸ್ತು ಕರುನಾಡ ಜನತಂತ್ರ - eNidhi India Travel Blog

Kannada Poem- ತಲೆತಗ್ಸ್ತು ಕರುನಾಡ ಜನತಂತ್ರ

ಸಧ್ಯದ ಕರ್ನಾಟಕ ರಾಜಕೀಯದ ಬಗ್ಗೆ ರತ್ನನ ಪ್ರಪಂಚ ಪದ್ಯ ಪ್ರೇರಿತ ಸಣ್ಣ ಕವನ ಬರೆದಿದ್ದೇನೆ, ಓದಿ ಅಭಿಪ್ರಾಯ ತಿಳಿಸಿ...


ಕುತ್ಕೊಳ್ಳಾಕ್ ಒಂದ್ ಚೇರು
ವದರಾಕೆ ಒಂದ್ ಮೈಕು
ಮಲಗಾಕೆ ವಿಧಾನಸೌಧ ಮಂಚ

ಬೈತಾವ್ರೆ ಸ್ಪೀಕರ್ರು
ಕೂಗ್ತಾವ್ರೆ ಲೀಡರ್ರು
ಎಕ್ಕುಟ್ಟೋಯ್ತ್ ಮೈತ್ರಿ ಪ್ರಪಂಚ

ಎಮ್ಮೆಲ್ಲೆ ಬರವೋಲ್ಲ್ರು
ಕುಮಾರಣ್ಣ ಬಿಡವೋಲ್ಲ್ರು
ಫೇಲಾಯ್ತು ಡಿಕೆಶಿ ತಂತ್ರ?

ವಿಶ್ವಾಸ ಮತ ಇಲ್ಲ
ಮಾತಾಡೋದ್ ಮುಗಿಯಲ್ಲ
ತುಕ್ ಹಿಡಿದ ಆಡಳಿತ ಯಂತ್ರ ..

ಸರ್ಕಾರ ಇದ್ರೂ ಇಲ್ದಿದ್ದ್ ಹಾಂಗೆ
ಗವರ್ನರ್ ಹೇಳಿದ್ದು ಕೇಳ್ದಿದ್ದ್ ಹಾಂಗೆ
ಸ್ಪೀಕರ್ ಗೆ ರೂಲ್ ಬುಕ್ಕೆ ಮಂತ್ರ

ಹೇಳ್ಕೊಳ್ಳಾಕ್ ಒಂದ್ ನಾಡು
ಯಾರಿಗ್ ಬೇಕ್ ನಮ್ ಪಾಡು
ತಲೆತಗ್ಸ್ತು  ಕರ್ನಾಟಕ ಜನತಂತ್ರ
ತಲೆತಗ್ಸ್ತು ಕರುನಾಡ  ಜನತಂತ್ರ
--------------------------------------------------

ಶ್ರೀನಿಧಿ ಹಂದೆ , https://www.enidhi.net

Read more:  Potholes ಹೊಂಡ  * Shaken but not stirred * Vasudha's Kannada Poem *

6 comments:

Appreciate your efforts and interests to comment. Comments may be moderated due to increased spam. Will ideally respond to comments within few days.Use Anonymous option if you don't wish to leave your name/ID behind- Shrinidhi

Powered by Blogger.