ನಾನು ಇತ್ತೀಚಿಗೆ ಓದಿದ ಕನ್ನಡ ಪುಸ್ತಕಗಳು
ಒಂದು ಆನೆಯ ಸುತ್ತ:
ಇದು ಆನೆಗಳ ಬಗ್ಗೆ ಆಸಕ್ತಿ ಇರುವುವವರು ಮತ್ತು ಕಾಡಿನಂಚಿನಲ್ಲಿ ಬದುಕಿ ಆಗಾಗ ಮಾನವ-ಪ್ರಾಣಿ ಸಂಘರ್ಷಕ್ಕೆ ತುತ್ತಾಗುವವರೆಲ್ಲ ಓದಲೇ ಬೇಕಾದ ಪುಸ್ತಕ. ಈ ಪುಸ್ತಕ ಕಾಲ್ಪನಿಕವಾದರೂ ನಿಜ ಜೀವನಕ್ಕೆ ಬಹಳ ಹತ್ತಿರವಾದದ್ದು. ಆನೆಗಳು ಏಕೆ ನಾಡಿಗೆ ಬರುತ್ತವೆ, ಏಕೆ ದಾಳಿ ಮಾಡುತ್ತವೆ, ಇತ್ಯಾದಿ ಸೂಕ್ಷ್ಮ ವಿಚಾರಗಳನ್ನು ತಿಳಿಸಿ ಕೊಡುವುದಲ್ಲದೆ ಕಾಡಿನಲ್ಲಿ ನಡೆಯುವ ಹಲವು ಅಕ್ರಮಗಳನ್ನು ನಮ್ಮೆದರು ಬಿಡಿಸಿಡುತ್ತದೆ.
ಆನೆಗಳಿಗೆ ಮಾನವರ ಮೇಲೆ ದಾಳಿ ಮಾಡಿ ಕೊಲ್ಲುವ ಉದ್ದೇಶವಿರುವುದಿಲ್ಲ. ಆದರೆ ಮಾನವರೇ ಪಟಾಕಿ ಸಿಡಿಸಿ ಅಥವಾ ಇನ್ನಿತರ ವಿಧಾನದ ಮೂಲಕ ಆನೆಯನ್ನು ಭಯಪಡಿಸುವುದರಿಂದ ಗಾಬರಿಯಾಗಿ ಆನೆಗಳು ಅನಗತ್ಯ ಆಕ್ರಮಣ ಮಾಡುವ ಸಂಧರ್ಭ ಸೃಷ್ಟಿಯಾಗುತ್ತದೆ
ಆನೆಗಳಿಗೆ ದಿನಕ್ಕೆ ನೂರಾರು ಕೆಜಿ ಆಹಾರ ಬೇಕಾಗುತ್ತದೆ , ಓಡಾಡಲು ವಿಶಾಲವಾದ ಜಾಗ ಬೇಕಾಗುತ್ತದೆ. ಆದರೆ ದಿನೇ ದಿನೇ ಕಾಡನ್ನು ಆಕ್ರಮಿಸುತ್ತಿರುವ ನಾವು ಆನೆಗಳನ್ನು ದೂರಿದರೆ ಏನು ಪ್ರಯೋಜನ? ಕಾಲ್ಪನಿಕ ಕಾದಂಬರಿಯಾದರೂ ನಿಜ ಜೀವನಕ್ಕೆ ಹತ್ತಿರವಾದುದು, ಕಾಡು, ವನ್ಯಜೀವಿಗಳ ಬಗ್ಗೆ ಸ್ವಲ್ಪವಾದರೂ ಆಸಕ್ತಿ ಇರುವವರು ಓದಲೇ ಬೇಕಾದ ಪುಸ್ತಕ.
ರಕ್ಷಕ ಅನಾಥ
ಹಲವು ಸಣ್ಣ ಕಥೆ, ಅನುಭವಗಳ ಪುಸ್ತಕ. ಲೇಖಕರ ಉಡುಪಿಯ ಪುಸ್ತಕ ಮಾರಾಟ ಅನುಭವ, ಐ . ಟಿ . ಕಂಪನಿಯ ಅನುಭವಗಳು ಚೆನ್ನಾಗಿವೆ. ಪ್ರಥಮ ಬಾರಿಗೆ ಲೇಖಕರಾದವರ ನೆರವಿಗಾಗಿ ಚಂದ ಪ್ರಕಾಶನ ಪ್ರಾರಂಭಿಸಿದ್ದು ಓದಿ ಖುಷಿಯಾಯಿತು. ಇತರ ಬರಹಗಳೂ ಚೆನ್ನಾಗಿವೆ.
ಬೋಳಾಯ ತಸ್ಮೈ ನಮಃ
ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಪುಸ್ತಕದ ಬಗ್ಗೆ ನನಗೆ ಅಪಾರ ನಿರೀಕ್ಷೆ ಇತ್ತು. ಆದರೆ ಎಲ್ಲೋ ಏನೋ ಸ್ವಲ್ಪ ಸಪ್ಪೆ ಎನಿಸಿತು. ಆದರೂ ಕೊಟ್ಟ ದುಡ್ಡಿಗೆ ಮೋಸವಿಲ್ಲ. ನಾನು ಪೂರ್ತಿ ಹಾಸ್ಯ ಬರಹವಿರಬಹುದು ಅಂದುಕೊಂಡಿದ್ದೆ, ಆದರೆ ಎಲ್ಲ ಬರಹದಲ್ಲೂ ಬಹುತೇಕ ಹನಿಗವನಗಳೇ ತುಂಬಿಕೊಂಡಿವೆ
ಚಾರ್ ಮಿನಾರ್
ಜಯಂತ ಕಾಯ್ಕಣಿ ಅವರ ಮೊದಲ ಪುಸ್ತಕ ನಾನು ಓದಿದ್ದು. ಕಥಾ ಸಂಕಲನ. ಕೆಲವೊಮ್ಮೆ ಬೋರಾದಾಗ ಪಕ್ಕಕ್ಕಿಟ್ಟು ಸ್ವಲ್ಪ ಸಮಯದ ನಂತರ ಮುಂದುವರೆಸಿದೆ. ಅಧುನಿಕ ಕತೆಗಳ ವೇಗ ಇಲ್ಲದಿರುವುದರಿಂದ ನಿಧಾನವಾಗಿ ಓದಿ ಅರ್ಥೈಸಿಕೊಳ್ಳಲು ಸ್ವಲ್ಪ ಸಮಯ ಬೇಕಾದುತ್ತದೆ

Leave a Comment