ಪಂಚರಂಗಿ ಚಿತ್ರ ವಿಮರ್ಶೆ Pancharangi Kannada movie review - eNidhi India Travel Blog

ಪಂಚರಂಗಿ ಚಿತ್ರ ವಿಮರ್ಶೆ Pancharangi Kannada movie review

This post is written in Kannada about a review of recent Kannada movie, Pancharangi. Non Kannada readers can check the August 2009 archives for the time being.

ಈ ಬ್ಲಾಗಿನಲ್ಲಿ ಕನ್ನಡದಲ್ಲಿ ಬರೆದು ಬಹಳ ದಿನಗಳಾದವು. ಇತ್ತೀಚಿಗೆ ನೋಡಿದ ಯೋಗೇಶ್ ಭಟ್ಟರ ಪಂಚರಂಗಿ ಚಿತ್ರದ ಸಂಕ್ಷಿಪ್ತ ವಿಮರ್ಶೆ ಇಲ್ಲಿ ಪ್ರಕಟಿಸುತ್ತಿದ್ದೇನೆ

ಒಟ್ಟಾರೆ ಹೇಳುವುದಾದರೆ ೨ ಗಂಟೆಗಳ ಅವಧಿಯಲ್ಲಿ ಒಂದು ಉತ್ತಮವಾದ ಚಿತ್ರ ನಿರ್ಮಿಸಿ ಕೊಡುವಲ್ಲಿ ಭಟ್ಟರು ಸಾಕಷ್ಟು ಯಶಸ್ವಿಯಾಗಿದ್ದಾರೆ ಎಂದೇ ಹೇಳಬಹುದು. ನನ್ನ ಕೆಲವು ಅನಿಸಿಕೆ/ಅಭಿಪ್ರಾಯಗಳು ಹೀಗಿವೆ:

ಇಡೀ ಚಿತ್ರದುದ್ದಕ್ಕೂ  ಕರಾವಳಿ ಸಮೀಪದ ದಕ್ಷಿಣ ಕನ್ನಡ ಶೈಲಿಯ ಮನೆ ಮತ್ತು ಅದರ ಸಮೀಪ ಇರುವ ಸಮುದ್ರ ಮಾತ್ರ ತೋರಿಸಲಾಗಿದೆ. ಇವೆರಡನ್ನೇ ಕ್ಯಾಮೆರಾದಲ್ಲಿ ಸಾಧ್ಯವಾದಷ್ಟು ಆಸಕ್ತಿದಾಯಕ ಆಂಗಲ್ ಗಳಲ್ಲಿ ತೋರಿಸಲಾಗಿದೆ.  ಇವೆರಡನ್ನೂ  ಬಿಟ್ಟರೆ ಇನ್ನೇನು ಇಲ್ಲ. ಅನಾವಶ್ಯಕವಾಗಿ ಇನ್ನೇನೋ ತೋರಿಸಬೇಕಿತ್ತೆಂದು ಹೇಳುವುದು ತಪ್ಪಾಗುತ್ತದಾದರು ಭಟ್ಟರು ಮಂಡೆ ಓಡಿಸಿದ್ದರೆ ಕರಾವಳಿ ಸುತ್ತ ಮುತ್ತಲಿನ ಜೀವನ ಶೈಲಿಯನ್ನು (ಉದಾ: ವಾರದ ಸಂತೆ, ಭತ್ತದ ನತ್ತಿ ನಡೆಯುವುದು, ಮೀನುಗಾರಿಕೆ etc )  ಚಿತ್ರ ಕತೆಗೆ ಪೂರಕವಾಗುವಂತೆ ಮತ್ತು ಪ್ರೇಕ್ಷಕರಿಗೆ ಬೋರ್ ಹೊಡೆಸದಂತೆ ತೋರಿಸಬಹುದಿತ್ತು (ಗುಲಾಬಿ ಟಾಕೀಸ್ ಚಿತ್ರ ನೋಡಿ)

ಐದು ಬಣ್ಣಗಳ ಪ್ರಸ್ತಾಪ ಸಿನೆಮಾದ ಪ್ರಾರಂಭ ದಲ್ಲಿ ಒಮ್ಮೆ ಆಗುವುದು ಬಿಟ್ಟರೆ ಉಳಿದಂತೆ ಅದಕ್ಕೂ, ಚಿತ್ರಕತೆಗೂ ಅಂತಹ  ಲಿಂಕ್ ಕಾಣಿಸುವುದಿಲ್ಲ. ಕತೆ ಚೆನ್ನಾಗಿದೆ, ಎರಡೇ ಎರಡು ದಿನಗಳ ಘಟನೆ, ಚಿಕ್ಕದಾಗಿ, ಚೊಕ್ಕವಾಗಿ ಶುರುವಾಗಿ ಪಟ್ಟನೆ ಮುಗಿದು ಹೋಗುತ್ತದೆ. ಫ್ಲಾಶ್ ಬ್ಯಾಕ್, ಹೊಡೆದಾಟ ಇತ್ಯಾದಿ ಅನಗತ್ಯ ಸರಕುಗಳಿಗೆಮುಕ್ತಿ.  ಬೋರು ಹೊಡೆಸದೇ ನೋಡಿಸಿಕೊಂಡು ಹೋಗುತ್ತದೆ, ಅನಗತ್ಯವಾಗಿ ಹಾಡುಗಳು ಬಂದಾಗಲೇ ಒಂದಿಷ್ಟು ಕಿರಿಕಿರಿಯಾಗುತ್ತದೆ. ಹಾಡುಗಳ ಸಾಹಿತ್ಯ ಮತ್ತು ಸಂಗೀತ ಅಷ್ಟೇನೂ ಇಷ್ಟವಾಗಲಿಲ್ಲ. ಲೈಫ್ ಉ  ಇಷ್ಟೇನೆ ಹಾಡು ಪರವಾಗಿಲ್ಲ, ಉಳಿದ ಹಾಡುಗಳು ಇರದಿದ್ದರೂ ಪರವಾಗಿರಲಿಲ್ಲ , ಒಂದೂವರೆ ಗಂಟೆ ಯಲ್ಲಿ ಸಿನಿಮಾ ಮುಗಿದು ಹೋಗುತ್ತಿತ್ತು. ವತ್ತಾಯಪೂರ್ವಕವಾಗಿ ಹಾಡುಗಳು ಇರಬೇಕು ಎಂಬ ಕಾರಣಕ್ಕೆ ಅವುಗಳನ್ನು ತುರುಕಿಸುವ ಅಗತ್ಯ ಇರಲಿಲ್ಲ.

ನಿತ್ಯಾನಂದ ಸ್ವಾಮಿಗಳು ಚಿತ್ರಕತೆ ಗೆ ತಮ್ಮ ಸ್ಪೂರ್ತಿ/ಕಾಣಿಕೆ  ನೀಡಿರುವುದು ಸ್ಪಷ್ಟ.

ನಾಯಕ ಸಿನಿಮಾದುದ್ದಕ್ಕೂ ಗಳು ಗಳು ಎಂದುಕೊಂಡೆ ತನ್ನ ಡೈಲಾಗ್ ಮುಗಿಸುತ್ತಾನೆ. ಹೊಸತನ, ಮ್ಯಾನರಿಸಂ ಎಂದುಕೊಂಡು ಸ್ವಲ್ಪ ಹೊತ್ತು ಆಸ್ವಾದಿಸಬಹುದಾದರು ಉಪ್ಪಿನಕಾಯಿ ರುಚಿಯಾಗಿದೆಯೆಂದು ಆನ್ನ ಸಾಂಬಾರ್ ಬದಲಿಗೆ ಎಲೆ ತುಂಬಾ ಉಪ್ಪಿನಕಾಯಿಯನ್ನೇ ಬಡಿಸಿದರೆ ಎಷ್ಟು ಜನರಿಗೆ ಇಷ್ಟವಾಗತ್ತೋ  ಗೊತ್ತಿಲ್ಲ. ಉಳಿದ ಪಾತ್ರಧಾರಿಗಳು ಉತ್ತಮವಾಗಿ ನಟಿಸಿ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ನನಗೆ ಬಹುತೇಕ ಪಾತ್ರದಾರಿಗಳ ಹೆಸರು ಮರೆತು ಹೋಗಿದೆ. ಹುಡುಗಿಯ ತಾಯಿ ಪಾತ್ರಧಾರಿಯನ್ನು ಟಿ ಏನ್ ಸೀತಾರಾಮರ ಧಾರಾವಾಹಿಗಳಲ್ಲಿ ನೋಡಿದ ನೆನಪು. ಮದುವೆ ಬ್ರೋಕರ್ ಪಂಚಾಕ್ಷರಿಯೇ ಸಿನೆಮಾದ ಎರಡನೇ ಹಿರೋ. ತಮ್ಮ ಅರ್ಥ ಗರ್ಭಿತವಾದ ಮಾತುಗಳಿಂದ ಗಮನ ಸೆಳೆಯುತ್ತಾರೆ.

Related:

ಸೇವ೦ತಿ ಕನ್ನಡ ಚಲನಚಿತ್ರ ವಿಮರ್ಶೆ * 16 in 1 Quick Movie Reviews

3 comments:

  1. ಪಂಚರಂಗಿ:
    aa directorgalu, aa producergalu
    aa haadugalu, aa kathegalu
    nodo naavugalu, thorso talkiesgalu
    nam kaili computergalu, update maadoke facebookgalu
    review bareyoke blogsgalu...


    lifeu ishtene...

    ReplyDelete
  2. Kannada post after a long time from you. Need to watch Pancharangi soon.

    ReplyDelete
  3. Mohan,

    yeah!, life u ishtene...

    Raveesh
    Do watch...

    ReplyDelete

Appreciate your efforts and interests to comment. Comments may be moderated due to increased spam. Will ideally respond to comments within few days.Use Anonymous option if you don't wish to leave your name/ID behind- Shrinidhi

Powered by Blogger.